ಬೆಳ್ತಂಗಡಿ ವಲಯ ನಡೆದು ಬಂದ ಹಾದಿ ...

      ಸತ್ಯ,ಧರ್ಮ,ದಾನ, ಅಹಿಂಸೆ, ಪರೋಪಕಾರಗಳಿಂದ ಅಂತರ್ ರಾಷ್ಟೀಯ ಮಟ್ಟದಲ್ಲಿ ಪ್ರಶಂಸಿಸಲ್ಪಡುವ ಪುಣ್ಯಭೂಮಿ ಶ್ರೀ ಕ್ಷೇತ್ರ ಧರ್ಮಸ್ಥಳ. ಪ್ರಸನ್ನ ಕಾಲದಲ್ಲಿ ಪ್ರಫುಲ್ಲತೆಯ ತಂಪು ಗಾಳಿಗೆ ಮನಸೋತು ಮುದಗೊಂಡ ಮನಸ್ಸು, ಕಂಗಳ ಚೆಲು ನೋಟಕ್ಕೆ ತಲೆಯೆತ್ತಿ ನೋಡಿದರೆ ಒಂದೆಡೆಯಿಂದ ಪ್ರಕೃತಿಯ ಸುಂದರ ಮಡಿಲಲ್ಲಿ ಮೈ ಚಾಚಿ ಮಲಗಿರುವ ಚಾರಿತ್ರಿಕ ಪ್ರಸಿದ್ಧಿಯ ಏಕಶಿಲಾ ಜಮಾಲಾಬಾದ್ ಕೋಟೆ (ನರಸಿಂಹಗಡ, ಗಡಾಯಿಕಲ್ಲು ಹೀಗೆ ಅನೇಕ ಹೆಸರಿನಲ್ಲಿ ಕರೆಯಲ್ಪಡುತ್ತಿದೆ.) ಮಗದೊಮ್ಮೆ ಸುತ್ತಲೂ ಕಣ್ಣಾಡಿಸಿದರೆ ರಮ್ಯಾ ಮನಮೋಹಕವಾದ ಗಿರಿ ಶಿಖರಗಳ ಸಾಲು ಸಾಲು. ಅದೇ ಸಾಲುಗಳ ನಡುವೆ ಕರಿಮಂಜು ಸೀಳಿ ಬೆಳ್ಳಿ ನೊರೆಗಳ ಉಗುಳುತ್ತಾ, ಕಲ್ಲು ಬಂಡೆಗಳ ಮೇಲೆ ಚೆಲ್ಲಾಡಿ ತೊರೆಗಳ ನಡುವೆ ನಲಿದು ನರ್ತಿಸುತ್ತಾ ಕಡಲು ಸೇರುವ ಹಂಬಲದಲ್ಲಿ ಹರಿದು ಬರುವಳು ಆಗ ತಾನೇ ಉಗಮಗೊಂಡ ನೇತ್ರಾವತಿ.
      ಇವೆಲ್ಲ ವೈಶಿಷ್ಟಗಳನ್ನು ತನ್ನದಾಗಿಸಿಕೊಂಡ ಪ್ರಶಾಂತವಾದ ಹೆಮ್ಮೆಯ ನಗರ ಬೆಳ್ತಂಗಡಿಯಲ್ಲಿ ನಾವು ನಮ್ಮ ಛಾಯಾಗ್ರಾಹಕರ ಸಂಘವನ್ನು ಕಟ್ಟಿ ಬೆಳೆಸಿದ್ದೇವೆ ಅಂದರೆ ಅದು ನಮ್ಮ ಪೂರ್ವಜನ್ಮದ ಪುಣ್ಯದ ಫಲವೇ ಇರಬೇಕು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಸಂಘಟನೆ ಹಲವಾರು ಎಡರು-ತೊಡರುಗಳನ್ನು ನಿವಾರಿಸುತ್ತಾ ಎಲ್ಲಾ ಛಾಯಾಗ್ರಾಹಕರನ್ನು ಒಟ್ಟುಗೂಡಿಸಿ ಅಂದು ಹದಿನೈದು ಜನ ಸದಸ್ಯರುಗಳಿಂದ ಹುಟ್ಟಿದ ಸಂಘ ಇಂದು 165 ಸದಸ್ಯರ ಒಂದು ದೊಡ್ಡ ಬಲಿಷ್ಠ ಸಂಘಟನೆಯಾಗಿದೆ.
      ಇಂತಹ ಫಲವತ್ತತೆಯ ಕ್ಷೇತ್ರ ಬೆಳ್ತಂಗಡಿಯಲ್ಲಿ ದಿನಾಂಕ 15-10-2002 ರಂದು ಉದಯವಾದ ನಮ್ಮ ಸಂಘಟನೆಯನ್ನು ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಕುಂದಾಪುರ, ದಯಾನಂದ ಪಯ್ಯಡೆ, ಜಿಲ್ಲಾ ಪದಾಧಿಕಾರಿಗಳು, ಇತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲ ಅವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತು.
      ಸ್ಥಾಪಕ ಅಧ್ಯಕ್ಷರಾಗಿ ಪಾಲಾಕ್ಷ ಪಿ. ಸುವರ್ಣ, ಗೌರವಾಧ್ಯಕ್ಷರಾಗಿ ಶಶಿಧರ ರಾವ್ ಗುರುವಾಯನಕೆರೆ ಹಾಗೂ ಸುಂದರ್ ಕೆ. ಬೆಳ್ತಂಗಡಿ, ಗೋಪಾಲ ಎನ್.ಎ., ಜಗಧೀಶ್ ಜೈನ್ ಧರ್ಮಸ್ಥಳ, ಉಮೇಶ್ ಮದ್ದಡ್ಕ, ಕಿರಣ್ ಕುಮಾರ್ ಅಳದಂಗಡಿ, ರತ್ನಾಕರ್ ಪುಂಜಾಲಕಟ್ಟೆ, ಶುಭಕರ ಕೆ. ನಡ, ಪ್ರಕಾಶ್ ರಾವ್ ಗುರುವಾಯನಕೆರೆ, ಗಣೇಶ್ ನರ್ಮದಾ ವೇಣೂರು, ಸೋಮಶೇಖರ್ ರಾವ್ ಉಜಿರೆ, ನವೀನಚಂದ್ರ ದಾಸಕೋಡಿ, ಬಾಬು ನೀರಾರಿ ಪುಂಜಾಲಕಟ್ಟೆ, ಅಶೋಕ ಚಾರ್ಮಾಡಿ ಸ್ಥಾಪಕ ಸದಸ್ಯರುಗಳಾಗಿದ್ದರು.

ಸಮಾಜಮುಖಿ ಕಾರ್ಯಕ್ರಮಗಳು

  • ಅಂದಿನಿಂದ ನಿರಂತರ ಸಮಾಜಮುಖಿ ಕಾರ್ಯಕ್ರಮಗಳಾದ ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಆರ್ಥಿಕ ಸಹಾಯ.
  • ನೆರಿಯ ಸಿಯೋನ್ ಮನೋರೋಗ ಆಸ್ಪತ್ರೆಗೆ ಅಕ್ಕಿ ಮತ್ತು ಹಣ್ಣು ಹಂಪಲು ವಿತರಣೆ.
  • ಕೊಕ್ಕಡ ಎಂಡೋಸಲ್ಫಾನ್ ಸಂತ್ರಸ್ತರ ಕೇಂದ್ರಕ್ಕೆ ಅಕ್ಕಿ ಮತ್ತು ಹಣ್ಣು ಹಂಪಲು ವಿತರಣೆ.
  • ಎಳೆ ವಯಸ್ಸಿನಲ್ಲಿ ಅಪಘಾತಕ್ಕೆ ತುತ್ತಾದ ಉಪನ್ಯಾಸಕಿಗೆ ಸಹಾಯ ಧನ.
  • ಬಡ ವಿದ್ಯಾರ್ಥಿಗಳಿಗೆ ವಿಧ್ಯಾ ನಿಧಿ.
  • ಸಮವಸ್ತ್ರ ಮತ್ತು ಪುಸ್ತಕ ವಿತರಣೆ.
  • ಸಂಘದ ಸದಸ್ಯರು ಮರಣ ಹೊಂದಿದ ಅವರ ಕುಟುಂಬಕ್ಕೆ ಸಂಘಟನೆಯಿಂದ ನೆರವು.
  • ರಸ್ತೆ ಅಪಘಾತದಲ್ಲಿ ಗಾಯಗೊಂಡ ಸದಸ್ಯರ ಚಿಕಿತ್ಸೆಗೆ ಸಹಾಯ ಧನದ ನೆರವು ನೀಡಲಾಗಿದೆ.

ರಾಷ್ಟ್ರೀಯ ದಿನಾಚರಣೆ

  • ಶಿಕ್ಷಕರ ದಿನಾಚರಣೆಯಂದು ನಿವೃತ್ತ ಶಿಕ್ಷಕರನ್ನು ಸಂಘದ ವತಿಯಿಂದ ಗುರುತಿಸುವಿಕೆ.
  • ಕನ್ನಡ ರಾಜ್ಯೋತ್ಸವ ಸಂದರ್ಭ ನಾಟಿ ವೈದ್ಯರುಗಳನ್ನು ಗುರುತಿಸುವಿಕೆ.
  • ಗಾಂಧಿ ಜಯಂತಿ ದಿನಾಚರಣೆಯಂದು ಮಧ್ಯಮುಕ್ತರಾದವರನ್ನು ಗೌರವಿಸುವುದು.
  • ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಜನ ಲೋಕಪಾಲ ಕಾಯಿದೆ ಜಾರಿ ಬರುವಂತೆ ಸರಕಾರಕ್ಕೆ ಒತ್ತಾಯ.

ಅಭಿನಂದನೆ

  • ಪರಮ ಪೂಜ್ಯ ಪದ್ಮ ವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ಪ್ರತಿ ವರ್ಷ ಸಂಘದ ವತಿಯಿಂದ ಅಭಿನಂದನೆ.
  • ಇತರ ಕ್ಷೇತ್ರದಲ್ಲಿ ಸಾಧನೆ ಮಡಿದ ಛಾಯಾಗ್ರಾಹಕರನ್ನು ಅಭಿನಂದಿಸುವಿಕೆ.

ತರಬೇತಿ

  • ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಈ ಜಗದಲ್ಲಿ ನಿತ್ಯ ಕೆಮರಾಗಳಲ್ಲೂ ಆಧುನೀಕರಣದ ಆವಿಷ್ಕಾರಗಳು ಬಂದಂತೆ ಸಂಘದ ಸದಸ್ಯರುಗಳಿಗೆ ಪರಿಣಿತ ತರಬೇತುದಾರರಿಂದ ಕಾರ್ಯಗಾರ ನಡೆಸುತ್ತಾ ಬರುತ್ತಿದೆ.

ಕ್ರೀಡಾಕೂಟ

  • ನಿತ್ಯ ಕರ್ತವ್ಯದ ಒತ್ತಡದಲ್ಲಿರುವ ಸದಸ್ಯರುಗಳನ್ನು ವರ್ಷದಲ್ಲಿ ಒಂದು ದಿನ ಬಿಡುವು ಮಾಡಿ ಎಲ್ಲಾ ಸದಸ್ಯರನ್ನು ಒಂದುಗೂಡಿಸಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲಾ ಸದಸ್ಯರ ಆತ್ಮೀಯತೆಗೆ ಪ್ರೀತಿಗೆ ಸಂಘವು ಮಹತ್ವವನ್ನು ನೀಡುತ್ತಿದೆ. ಅಲ್ಲದೆ ಇತರ ವಲಯಗಳು ಆಯೋಜಿಸುವ ಕ್ರೀಡಾಕೂಟಗಳಲ್ಲಿ ವಲಯವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
  • ಜಿಲ್ಲಾ ಮಟ್ಟದ ಕೆಸರುಗದ್ದೆ ಪಂದ್ಯಾಟ.
  • ವಲಯಾಧ್ಯಕ್ಷ ಉಮೇಶ್ ಮದ್ದಡ್ಕ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾಕಾರ್ಯದರ್ಶಿ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಮಾರ್ಗದರ್ಶನದಲ್ಲಿ ಗುರುವಾಯನಕೆರೆ ಗದ್ದೆಯಲ್ಲಿ ವಿಶಿಷ್ಟ ರೀತಿಯ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿ ಉತ್ತಮ ಶಿಸ್ತಿನ, ಅಚ್ಚುಕಟ್ಟಿನ ಕಾರ್ಯಕ್ರಮ ಎಂದು ಇತರ ವಲಯಗಳ ಹಾಗೂ ಸ್ಥಳೀಯ ಇತರ ಸಂಘ ಸಂಸ್ಥೆಗಳ ಪ್ರಶಂಸೆಗೆ ಪಾತ್ರವಾಗಿದೆ.

ಅಧ್ಯಾಯನ ಪ್ರವಾಸ

  • ವಲಯದ ಎಲ್ಲಾ ಸದಸ್ಯರನ್ನು ಒಳಗೊಂಡು ಪ್ರತಿ ವರ್ಷ ರಾಜ್ಯದ ಅನೇಕ ಭಾಗಗಳಿಗೆ ಅಧ್ಯಾಯನ ಪ್ರವಾಸವನ್ನು ಮಾಡಿರುತ್ತೇವೆ.

ಶಿಸ್ತು

  • ಬೆಳ್ತಂಗಡಿ ವಲಯವು ಶಿಸ್ತಿಗೆ ಪ್ರಾಶಸ್ತ್ಯನೀಡುವ ಸಲುವಾಗಿ ಸಂಘದ ಸರ್ವ ಸದಸ್ಯರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಕಪ್ಪು-ಬಿಳುಪು ಸಮವಸ್ತ್ರ ಧರಿಸಿ ಇತರ ವಲಯಗಳಿಗೆ ಮಾದರಿ ವಲಯ ಎಂದೆನಿಸಿಕೊಂಡಿದೆ

ಸಂಘಕ್ಕಾಗಿ ನಿವೇಶನ

  • ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯವು ಸ್ವಂತ ನಿವೇಶನವನ್ನು ಖರೀದಿಸಿ ಛಾಯಾಭವನವನ್ನು ನಿರ್ಮಿಸಿ ಲೋಕಾರ್ಪಣೆಗೊಂಡಿರುತ್ತದೆ.
  • ಈ ಛಾಯಾಭವನವು 1600 ಚದರ ಅಡಿ ವಿಸ್ತೀರ್ಣವಾಗಿದ್ದು ಕಟ್ಟಡ ನಿರ್ಮಾಣ ವೆಚ್ಚ ಹಾಗೂ ಒಳ ಪಿಠೋಪಕರಣದ ಮೌಲ್ಯ ಸುಮಾರು 24 ಲಕ್ಷದಾಗಿದೆ.ಈ ನಿವೇಶನ ಹಾಗೂ ಕಟ್ಟಡದ ಮೌಲ್ಯ ಸುಮಾರು 50 ಲಕ್ಷಕ್ಕೂ ಅಧಿಕವಾಗಿದೆ. ಅಲ್ಲದೆ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಛಾಯಾಗ್ರಾಹಕರೇ ನಿರ್ಮಿಸಿದ ಛಾಯಾಭವನ ಎಂಬ ಹೆಗ್ಗಳಿಕೆ ಹೊಂದಿದೆ.

ವಲಯಕ್ಕೆ ಸಂಧ ಗೌರವ

  • ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ 14 ವಲಯಗಳ ಪೈಕಿ ಬೆಳ್ತಂಗಡಿ ವಲಯಕ್ಕೆ ಸತತ ಮೂರು ಬಾರಿ ಪ್ರಥಮ ಹಾಗೂ ಒಂದು ಬಾರಿ ದ್ವಿತೀಯ ವಲಯ ಪ್ರಶಸ್ತಿ ಪಡೆದುಕೊಂಡಿರುತ್ತದೆ.

ಜಿಲ್ಲೆಗೆ ವಲಯದಿಂದ ಸೇವೆ

  • ನಮ್ಮ ವಲಯದ ಸದಸ್ಯ ಜಗಧೀಶ ಜೈನ್ ಧರ್ಮಸ್ಥಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ರವರು ಜಿಲ್ಲಾ ಕ್ರೀಡಾಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಪ್ರಸ್ತುತ ಜಿಲ್ಲಾ ಅಧ್ಯಕ್ಷರಾಗಿ, ಸುರೇಶ್ ಕೌಡಂಗೆ ಜಿಲ್ಲಾ ಮಾಧ್ಯಮ ಪ್ರತಿನಿಧಿಯಾಗಿ ಸೇವೆ ನೀಡಿರುತ್ತಾರೆ.

Show more (+)

ವಲಯವನ್ನು ಮುನ್ನಡೆಸಿದ ಸಾರಥಿಗಳು.

flag

ಸುಂದರ ಕೆ.

flag

ಸುಬ್ರಹ್ಮಣ್ಯ ಕೆ.ಜಿ

flag

ಉಮೇಶ

flag

ಉಮೇಶ ಕುಮಾರ್

flag

ನಂದಕುಮಾರ್

flag

ಮೌರಿಸ್ ಫೆರ್ನಾಂಡಿಸ್

flag

ವಸಂತ

flag

ಪಾಲಾಕ್ಷ ಪಿ. ಸುವರ್ಣ

flag

ಗೋಪಾಲ ಎನ್.ಎ

flag

ಜಗದೀಶ ಜೈನ್

flag

ವಿಲ್ಸನ್ ಗೊನ್ಸಾಲ್ವಿಸ್ ವಿಲ್ಸ್

ಚಿತ್ರಸಂಪುಟ

ನಮ್ಮ ಸಂಘದಿಂದ ಸೇವಾ ಕಾರ್ಯಕ್ರಮಗಳು