ಮಂಗಳೂರು ವಲಯ ನಡೆದು ಬಂದ ಹಾದಿ ನಡೆದು ಬಂದ ಹೆಜ್ಜೆಗಳು....

      ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಾಯಿಸುತ್ತಿರುವ ಗೋಸುಂಬೆಯಂತೆ ನಮ್ಮ ಛಾಯಾಗ್ರಹಣವೂ ದಿನದಿಂದ ದಿನಕ್ಕೆ ಹೊಸ ರೂಪವನ್ನು ತಾಳುತ್ತಿದೆ. ಈ ಬಣ್ಣದ ಬದುಕಿನ ಹಿಂದೆ ಓಡುವುದಕ್ಕೆ ನಮ್ಮ ಛಾಯಾಗ್ರಾಹಕ ಒದ್ದಾಡುತ್ತಿದ್ದಾನೆ. ಕರಣ ಇಷ್ಟೆ, ವೃತ್ತಿಯಲ್ಲಿ ಪೈಪೋಟಿ, ಛಾಯಾಚಿತ್ರಗಳಲ್ಲಿ ವೈವಿಧ್ಯತೆ, ದಿನಕ್ಕೊಂದರಂತೆ ಹುಟ್ಟುತ್ತಿರುವ ಹೊಸ ಆವಿಷ್ಕಾರಗಳು.
      ಹಿಂದೊಮ್ಮೆ ಛಾಯಾಗ್ರಹಣವು ಹತ್ತು ಹಲವು ಮೆಟ್ಟಿಲುಗಳನ್ನೊಳಗೊಂಡ ತಂತ್ರಗಾರಿಕೆಯಿಂದ ಹೊರಬರುವಂತಹದಾಗಿತ್ತು. ಕೇವಲ ಕಪ್ಪು-ಬಿಳುಪು ಚಿತ್ರಗಳು ಇರುವ ಕಾಲದಲ್ಲಿ ನೆಗೆಟಿವ್ ನಲ್ಲಿ ಫೋಟೋ ತೆಗೆದು ತೊಳೆದು ರಿ-ಟಚ್ ಮಾಡಿ ಬಣ್ಣ ಹಚ್ಚಿ, ಕತ್ತಲ ಕೋಣೆಯಲ್ಲಿ ಅಚ್ಚು ಹಾಕಿ, ಫಿಕ್ಸ್ ಮಾಡಿ, ತೊಳೆದು ಒಣಗಿಸಿ, ಫೋಟೋದ ಮೇಲಿನ ಕಲೆಗಳನ್ನು ಫಿನಿಷಿಂಗ್ ಮಾಡುವಂತಹ ದೀರ್ಘ ಪ್ರೊಸೆಸಿಂಗ್ ನಿಂದ ತುಂಬಿತ್ತು.
      ಛಾಯಾಗ್ರಾಹಕನ ಈ ರೀತಿಯ ಕ್ರಿಯೇಟಿವ್ ಕೆಲಸಕ್ಕೆಂದೇ ಏನೋ ಆಗಿನ ಕಾಲದಲ್ಲಿ ಸ್ಟುಡಿಯೋದ ಹೆಸರಿನ ಹಿಂದೆ "ಆರ್ಟ್ ಸ್ಟುಡಿಯೋ" ಎಂದು ಕೂಡಿಸುತ್ತಿದ್ದರು. ಛಾಯಾಗ್ರಾಹಕವಾಗಬೇಕಿದ್ದರೆ ಕನಿಷ್ಠ 7-10 ವರ್ಷಗಳ ಕಾಲ ಸ್ಟುಡಿಯೋದಲ್ಲಿ ದುಡಿದು ಮುಂದೆ ಬರಬೇಕಾಗಿದ್ದ ಕಾಲವೊಂದಿತ್ತು.
      ಇಂತಹ ಕಷ್ಟಕರ ಕಾಯಕವನ್ನು ಮನಗಂಡು ಸುಮಾರು 25 ವರ್ಷದ ಹಿಂದೆ ಹತ್ತು ಹಲವು ಹಿರಿಯ ಛಾಯಗ್ರಾಹಕರು ಸೇರಿ ಛಾಯಗ್ರಾಹಕರ ನೋವು ನಲಿವಿಗೆ ಸ್ಪಂಧಿಸಲು "ದ.ಕ. ಛಾಯಗ್ರಾಹಕರ ಸಂಘ" ವನ್ನು ಹುಟ್ಟು ಹಾಕಿದರು. ಮುಖ್ಯವಾಗಿ ಆರ್.ಬಿ.ಸನಿಲ್ ಅವರನ್ನು ಈ ಸಂದರ್ಭ ನೆನೆಯಬೇಕಾದದ್ದು ನಮ್ಮ ಕರ್ತವ್ಯ.

      1990 ರಲ್ಲಿ ಪ್ರಾರಂಭವಾದ ಈ ಸಂಘವನ್ನು ನಂತರದಲ್ಲಿ ಕಾರ್ಯದಕ್ಷತೆಗಾಗಿ ಹಲವು ಉಪವಲಯಗಳನ್ನಾಗಿ ವಿಂಗಡಿಸಲಾಯಿತು. ಸಂಘದ ಮೂಲ ಕಛೇರಿ ಮಂಗಳೂರಿನಲ್ಲಿದ್ದರೂ, ಸಾಕಷ್ಟು ಸ್ಥಾಪಕ ಸದಸ್ಯರು ಮಂಗಳೂರಿನವರೇ ಆಗಿದ್ದರು. ಹಲವು ವರುಷಗಳಿಂದ ಮಂಗಳೂರಿನ ಛಾಯಗ್ರಾಹಕರೇ ಹೆಚ್ಚಾಗಿ ಮಾತೃ ಸಂಘದ ಪದಾಧಿಕಾರಿಗಳ ಸ್ಥಾನದಲ್ಲಿ ದುಡಿದಿದ್ದರೂ, ಮಂಗಳೂರು ವಲಯ ಸ್ಥಾಪನೆಯಾಗಲು ಸರಿ ಸುಮಾರು 10 ವರುಷಗಳು ಕಾಯಬೇಕಾಯಿತು.
      ವೃತ್ತಿ ರಂಗದ ಪೈಪೋಟಿ ಹೆಚ್ಚಾದಂತೆ, ವೃತ್ತಿಯೇತರ ವ್ಯಕ್ತಿಗಳ ಉಪಟಳ ಜೋರಾದಂತೆ,ವಲಯ ಸ್ಥಾಪಿಸುವ ಅನಿವಾರ್ಯತೆ ಕಂಡು ಬಂದಾಗ ಮಂಗಳೂರು ನಗರದಿಂದ ಸುರತ್ಕಲ್, ಬಜ್ಪೆ, ಗಂಜಿಮಠ, ಕೊಣಾಜೆ, ತಲಪಾಡಿವರೆಗಿನ ವೃತ್ತವನ್ನು ಗುರುತಿಸಿ 'ಮಂಗಳೂರು ವಲಯ' ಸ್ಥಾಪಿಸಲು ತೀರ್ಮಾನಿಸಲಾಯಿತು. ಹರ್ಷಾಕರ್, ಸಿ.ಎ. ಸಾಲ್ಯಾನ್, ಮನೋಜ್, ದಯಾನಂದ್ ಪೈಯಾಡೇ, ಅನಿಲ್ ಬಿಜೈ, ದೇವಿಪ್ರಸಾದ್, ಕೆ. ಮನೋಹರ್ ಸೋನ್ಸ್, ಪ್ರವೀಣ್, ರಮೇಶ್, ಅರುಣ್ ತೊಕ್ಕೊಟ್ಟು, ಸಂತೋಷ್ ಮಾರ್ಲ ಹಾಗೂ ಇನ್ನೂ ಕೆಲವು ಸದಸ್ಯರು ವಲಯ ಸ್ಥಾಪಿಸಲು ಮುತುವರ್ಜಿ ವಹಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗುತ್ತದೆ.
      2001 ರ ಸಪ್ಟೆಂಬರ್ 30 ರಂದು ಲಯನ್ಸ್ ಕ್ಲಬ್ ಮಲ್ಲಿಕಟ್ಟೆ ಇಲ್ಲಿ ಸಿ.ಎ. ಸಾಲ್ಯಾನ್ ಇವರ ಘನ ಅಧ್ಯಕ್ಷತೆಯಲ್ಲಿ ಮೊದಲ ವಲಯ ಮಹಾಸಭೆಯನ್ನು ನಡೆಸಲಾಯಿತು. ಸುಮಾರು 500 ಕ್ಕಿಂತಲೂ ಹೆಚ್ಚು ಸದಸ್ಯರನ್ನೊಳಗೊಂಡ ಮಂಗಳೂರು ವಲಯ ಮನೋಹರ್ ಸೋನ್ಸ್, ರಮೇಶ್ ಕಲಾಶ್ರೀ, ಜಗನ್ನಾಥ್ ಶೆಟ್ಟಿ, ಗಣೇಶ್ ಶೆಣೈ, ಚಂದ್ರಕಾಂತ್ ಇವರ ಅಧ್ಯಕ್ಷತೆಯಲ್ಲಿ ಮುಂದುವರಿಸಿಕೊಂಡು ಬಂದಿತು. ಇದೀಗ 2015-2017 ನೇ ಸಾಲಿಗೆ ಲೋಕೇಶ್ ಅವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರು ವಲಯದ ಸ್ಥಳ ವ್ಯಾಪ್ತಿಯು ದೊಡ್ಡದಾಗಿದ್ದುದರಿಂದ ಹಾಗೂ ಸದಸ್ಯರ ಸಂಖ್ಯೆಯು ಹೆಚ್ಚಾಗಿದ್ದುದರಿಂದ 2008 ಮತ್ತು 2010 ರಂದು ಸುರತ್ಕಲ್ ಮತ್ತು ಉಳ್ಳಾಲ ಪ್ರದೇಶವನ್ನು ಮಂಗಳೂರು ವಲಯದಿಂದ ಬೇರ್ಪಡಿಸಿ ಮಂಗಳೂರಿನ ಕಾರ್ಯವ್ಯಾಪ್ತಿಯನ್ನು ಕಿರಿದುಗೊಳಿಸಲಾಯಿತು. 2001 ರಿಂದ ವಲಯ ನಡೆದು ಬಂದ ಹಾದಿ ಹಾಗೂ ಕಾರ್ಯಚಟುವಟಿಕೆಗಳನ್ನೊಮ್ಮೆ ಅವಲೋಕಿಸೋಣ.

Show more (+)

ಮಂಗಳೂರು ವಲಯವನ್ನು ಮುನ್ನಡೆಸಿದ ಸಾರಥಿಗಳು.

flag

ಸಿ.ಎ. ಸಾಲ್ಯಾನ್.

flag

ಲೋಕೇಶ್ ಕುಮಾರ್.

flag

ಮನೋಹರ್ ಸೋನ್ಸ್.

flag

ರಮೇಶ್ ಕಲಾಶ್ರೀ

flag

ಜಗನ್ನಾಥ್ ಶೆಟ್ಟಿ

flag

ಗಣೇಶ್ ಶೆಣೈ

flag

ಚಂದ್ರಕಾಂತ.

ಚಿತ್ರಸಂಪುಟ

ನಮ್ಮ ಸಂಘದಿಂದ ಸೇವಾ ಕಾರ್ಯಕ್ರಮಗಳು