ಇತಿಹಾಸ

      1950 ರಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಛಾಯಾಗ್ರಾಹಕರ ಸಂಘಟನೆ ಹಲವಾರು ಎಡರು ತೊಡರುಗಳನ್ನು ನಿವಾರಿಸುತ್ತಾ ಎಲ್ಲಾ ಛಾಯಾಗ್ರಾಹಕರನ್ನು ಮಡಿಲಲ್ಲಿರಿಸಿ ಕಣ್ಣೀರು ಒರೆಸಿ, ಪ್ರೀತಿಯಿಂದ ಲಾಲಿಸಿ ಮಮತೆಯಿಂದ ಪಾಲಿಸಿ ಈ ಹಂತಕ್ಕೆ ಬಂದು ತಲುಪಿತು.


      1989 ರ ಕಪ್ಪು ಬಿಳುಪು ಛಾಯಾಗ್ರಹಣದ ಕಾಲ. ಮಂಗಳೂರಿಗೆ ಕಾಲಿಟ್ಟಿತು. ಬಣ್ಣ ಚಿತ್ರಗಳ ಕಲರ್ ಲ್ಯಾಬ್ ಗಳು.ಇದು ಛಾಯಾಗ್ರಾಹಕರ ವ್ಯವಹಾರ ವಿಚಾರದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದ ಸಂದರ್ಭ! ಬದಲಾವಣೆಯ ಕಾಲಘಟ್ಟದಲ್ಲಿ ಕಲರ್ ಚಿತ್ರಗಳು ಛಾಯಾಗ್ರಾಹಕರಿಗೆ ಪ್ರಯೋಜನವಾಯಿತು. ಈ ಸಂದರ್ಭ ಛಾಯಾಗ್ರಾಹಕರ ಈ ಸಮಸ್ಯೆ ಬಗೆಹರಿಸಲು ಸಮಾನ ಮನಸ್ಕರು ಒಟ್ಟು ಸೇರಬೇಕಾಯಿತು. ಆದರ್ಶ್ ಸ್ಟುಡಿಯೋದ ಕರುಣಾಕರ್ ಮತ್ತು ವಿಠ್ಠಲ ಚೌಟರವರ ನಾಯಕತ್ವದಲ್ಲಿ 12 ಜನ ಸದಸ್ಯರು ಒಟ್ಟು ಸೇರಿ ರೂಪು ರೇಷೆಗಳನ್ನು ಸಿದ್ಧಪಡಿಸಿತು.

       ಮಂಗಳೂರಿನಲ್ಲಿ ಛಾಯಾಗ್ರಾಹಕರ ಸಂಘಟನೆಗೆ ಸ್ಥಾಪನೆಗೊಂಡಿತು. ಅಧ್ಯಕ್ಷರಾಗಿ ಆರ್.ಬಿ ಸನೀಲ್ ಸ್ಥಾಪಕ ಪದಾಧಿಕಾರಿಗಳಾಗಿ ಕರುಣಾಕರ್, ಹಿಮ್ಮತ್ ಲಾಲ್ ವಸಂತ್, ಮೋಹನ್ ಜನಾರ್ಧನ್, ಪ್ರಕಾಶ್ ಅಲೆವೂರಾಯ, ಸಂಜೀವ ಕಂಕನಾಡಿ, ಶಾಂತರಾಮ್ ಬಾಲ್ನೋ, ವಿಠ್ಠಲ್ ಚೌಟ, ಕೀರ್ತಿ ಮಂಗಳೂರು, ನವೀನ್ ಕುದ್ರೋಳಿ, ಡೆನ್ನಿಸ್ ರೇಗೋ, ಜಯಕರ ಸಮರ್ಥ ಆಯ್ಕೆಯಾದರು.

      ಈ ತರಹ ಆರಂಭಿಸಿತು. ಅವಿಭಜಿತ ದ.ಕ ಜಿಲ್ಲೆಯಾದ್ಯಂತ ಹೊಸಕ್ರಾಂತಿ, ಛಾಯಾಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ, ಅನ್ಯಾಯದ ವಿರುದ್ಧ ಹೋರಾಡಿ ಸ್ಟುಡಿಯೋದ ಮೂಲಭೂತ ಸಮಸ್ಯೆಗಳ ಬಗೆಹರಿಸುವಲ್ಲಿ ಪಕ್ಷ ಭೇದವಿಲ್ಲದೆ ಹೋರಾಡಿತು. ಪ್ರತಿ ಸ್ಟುಡಿಯೋಗಳಿಗೂ ಸಂಪರ್ಕಿಸಿ ಸಂಘಟನೆಯನ್ನು ಗಟ್ಟಿಗೊಳಿಸಲಾಯಿತು.

      1990 ರಲ್ಲಿ 57 ಜನರನ್ನು ಒಟ್ಟುಗೂಡಿಸಿದ ನಮ್ಮ ಸಂಘಟನೆ ಪ್ರಾರಂಭಗೊಂಡು ಇಂದು ಸುಮಾರು 3 ಸಾವಿರ ಸದಸ್ಯ ಬಲವನ್ನು ಪಡೆದು ರಜತ ವರ್ಷಕ್ಕೆ ಕಾಲಿಟ್ಟಿದೆ. ಅವಿಭಜಿತ ಜಿಲ್ಲೆಯಲ್ಲಿ ಸದೃಢವಾದ ಸಂಘಟನೆಯಾಗಿ ಬೆಳೆಯುವುದರ ಜೊತೆಗೆ ಸಮಾಜ ಸೇವೆಯೊಂದಿಗೆ ಉಭಯ ಜಿಲ್ಲೆಯ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದೆ.

      06-08-2005 ರಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗಡೆಯವರ ದಿವ್ಯಹಸ್ತದಿಂದ ಮಂಗಳೂರಿನ ಹೃದಯ ಭಾಗದಲ್ಲಿ ನಮ್ಮ ಸ್ವಂತ ಕಟ್ಟಡ "ಛಾಯಾಭವನ" ಉದ್ಘಾಟನೆಗೊಂಡಿತು.

      ಸಂಘದ ಸದಸ್ಯರ ಏಳಿಗೆಗಾಗಿ ರಜತ ಸಂಭ್ರಮದ ಸವಿನೆನಪಿಗಾಗಿ ಸದಸ್ಯರ ಆರ್ಥಿಕ ಸ್ವಾವಲಂಬನೆಗಾಗಿ ಸದಸ್ಯ ಪಾಲುದಾರರ ಬಲದಿಂದ ನಮ್ಮದೇ ಆರ್ಥಿಕ ಸಹಕಾರಿ ಸಂಘ ಸ್ಥಾಪನೆ ಮಾಡಲಾಯಿತು. ಇಂದು ಈ ಸಂಸ್ಥೆ ಯಶಸ್ವಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಛಾಯಬಂಧುಗಳಿಗೆ ಆಪತ್ಕಾಲದ ಸಾಲ ಸೌಲಭ್ಯ ನೀಡುವ ಮೂಲಕ ಬ್ಯಾಂಕ್ ಲಾಭದತ್ತ ಹೆಜ್ಜೆ ಇಡುತ್ತಿದೆ.

      ಸಂಘಟನೆಯ ಶಕ್ತಿಗೆ ಸಾಕ್ಷಿಯಾಗಿ ಜಿಲ್ಲಾಧ್ಯಕ್ಷರ ಮತ್ತು ಜಿಲ್ಲೆಗೆ ಸೇರಿದ 14 ವಲಯಗಳ ಅಧ್ಯಕ್ಷರ ಸರ್ವಸದಸ್ಯರ ನೇತೃತ್ವದಲ್ಲಿ ಸದಸ್ಯರ ಕುಟುಂಬಗಳಿಗೆ ಸಹಾಯ ಧನವನ್ನು ತುರ್ತು ಸಂದರ್ಭದಲ್ಲಿ ನೀಡುತ್ತಿದೆ ಮತ್ತು ಆರೋಗ್ಯ ಶಿಬಿರಗಳನ್ನು ನಡೆಸಿ ಮಾಹಿತಿ ನೀಡುತ್ತಿದೆ. ಈ ಸಂಘಟನೆ ಛಾಯಾಗ್ರಾಹಕ ಸಂಸಾರದ ಜೀವನಕ್ಕೂ ಆಸರೆಯಾಗಿದೆ.

      ನಮಗೆ ಸ್ವಲ್ಪ ಪರರಿಗೆ ಸರ್ವಸ್ವ ಎನ್ನುವಂತೆ ..! ಛಾಯಾಗ್ರಾಹಕರು ಒಂದಾಗಿ ಸಂಘಟನೆಯಡಿಯಲ್ಲಿ ಸಾರ್ವಜನಿಕರಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ನೇತ್ರ ಚಿಕಿತ್ಸೆ, ನೇತ್ರದಾನ, ಕನ್ನಡಕ ವಿತರಣೆ, ಗಾಲಿ ಕುರ್ಚಿ ವಿತರಣೆ ಮುಂತಾದ ಸಾಮಾಜಿಕ ಕಳಕಳಿಯ ಸ್ಪಂದನೆ ಹಾಗೂ ಕ್ರೀಡೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಜನೆಯ ಮೂಲಕ ಜನಪರ ಸಂಘಟನೆಯಾಗಿ ಗುರುತಿಸಿದೆ.

      ನಮ್ಮ ಈ ಸಂಘಟನೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಅವಿಭಾಜಿತ ಜಿಲ್ಲೆಯಲ್ಲಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ ಸಂಘಟನೆಯಾಗಿ ಬೆಳೆದಿದೆ.

ಸ್ಥಾಪಕ ಸದಸ್ಯರು