ಮೂಲ್ಕಿ ವಲಯದ ಸಾಧನೆಯ ಹೆಜ್ಜೆ...

      ನಮ್ಮ ವಲಯವು ಕಳೆದ ಹತ್ತು ವರ್ಷಗಳ ಹಿಂದೆ 2003-2004 ರಲ್ಲಿ ಮೂಲ್ಕಿಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಆಗಿನ ಮೂಲ್ಕಿಯ ವೃತ್ತ ನಿರೀಕ್ಷಕ ಶ್ರೀ ನಾಗಭೂಷಣ್ ರವರು ನಮ್ಮ ಜಿಲ್ಲಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದರು. ಕಿನ್ನಿಗೋಳಿ ಪ್ರತಿಮಾ ಸ್ಟುಡಿಯೋ ಮಾಲಕರಾದ ಶ್ರೀ ಬಿ. ಸೇಸಪ್ಪ ಸಾಲ್ಯಾನ್ ರವರು ಸ್ಥಾಪಕ ಅಧ್ಯಕ್ಷರಾದರು. ಸ್ಥಾಪಕ ವರ್ಷದ ಪದಾಧಿಕಾರಿಗಳ ವಿವರ:
ಅಧ್ಯಕ್ಷರು: ಶ್ರೀ ಬಿ. ಸೇಸಪ್ಪ ಸಾಲ್ಯಾನ್             ಉಪಾಧ್ಯಕ್ಷರು: ಶ್ರೀ ಭಾಗ್ಯವಾನ್ ಸನಿಲ್            ಕಾರ್ಯದರ್ಶಿ: ಶ್ರೀ ಅಶ್ವತ್ಥ ನಾರಾಯಣ ರಾವ್
ಜೊ. ಕಾರ್ಯದರ್ಶಿ: ಶ್ರೀ ಲೈನಲ್ ಪಿಂಟೋ             ಕೋಶಾಧಿಕಾರಿ: ಶ್ರೀ ಹರೀಶ್ ಪಿ. ಕೋಟ್ಯಾನ್

  • 2005-06 ರಲ್ಲಿ ಶ್ರೀ ಅಶ್ವತ್ಥ ನಾರಾಯಣ ರಾವ್ ಅಧ್ಯಕ್ಷರಾಗಿ ಮೂಲ್ಕಿ ವಲಯವನ್ನು ಮುನ್ನಡೆಸಿ,ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
  • 2007-09 ರಲ್ಲಿ ಶ್ರೀ ಭಾಗ್ಯವಾನ್ ಸನಿಲ್ ರವರು ಅಧ್ಯಕ್ಷರಾಗಿ ಮೂಲ್ಕಿ ವಲಯವನ್ನು ಮುನ್ನಡೆಸಿದರು.
  • 2009-11 ರಲ್ಲಿ ಶ್ರೀ ಲೈನಲ್ ಪಿಂಟೋ ರವರು ವಲಯದ ಅಧ್ಯಕ್ಷತೆಯನ್ನು ವಹಿಸಿಕೊಂಡು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
  • 2011-13 ರಲ್ಲಿ ಶ್ರೀ ರಫಾಯಲ್ ರೆಬೆಲ್ಲೋರವರು ನಮ್ಮ ವಲಯದ ಸಮರ್ಥ ನಾಯಕತ್ವವನ್ನು ವಹಿಸಿಕೊಂಡು ವಲಯವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದು, ವಲಯದ ಛಾಯಾಗ್ರಾಹಕರಿಗೆ ಕಷ್ಟಕಾಲದಲ್ಲಿ ಸಹಾಯಧನ, ಸಾರ್ವಜನಿಕರ ಆರೋಗ್ಯ ಭಾಗ್ಯಕ್ಕೆ ಸಹಾಯ ಸಹಕಾರ ನೀಡಿದರು ಮತ್ತು ದಶಮಾನೋತ್ಸವ
  • 2013-15 ರ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ನವೀನ್ ಕುಮಾರ್ ಕಟೀಲು ಚುನಾಯಿತರಾದರು. "ದಶಮಾನೋತ್ಸವ ವರ್ಷ"ದಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಹಾಗೂ ಎಲ್ಲಾ ವಲಯಗಳ ಪ್ರಶಂಸೆಗೆ ಪಾತ್ರವಾಗಿದ್ದು, ಜಿಲ್ಲಾ ಸಮಿತಿಯಿಂದ "ಎಕ್ಸಲೆಂಟ್ ಅವಾರ್ಡ"ನ್ನು ಪಡೆದುಕೊಂಡಿತು.

      ನಮ್ಮ ವಲಯದ ವತಿಯಿಂದ ದಶಮಾನೋತ್ಸವದ ನೆನಪಿಗಾಗಿ ಆಯೋಜಿಸಿದ ಜಿಲ್ಲಾಮಟ್ಟದ "ಕೆಸರುಗದ್ದೆ ಕ್ರೀಡಾಕೂಟ" ಹಾಗೂ ಜಿಲ್ಲಾಮಟ್ಟದ "ಸಾಂಸ್ಕೃತಿಕ ಸ್ಪರ್ಧೆ"ಯು ಜಿಲ್ಲೆ ಹಾಗೂ ವಲಯದ ಪ್ರಶಂಸೆಗೆ ಪಾತ್ರವಾಯಿತು. ನಮ್ಮ ವಲಯದ ವತಿಯಿಂದ ಸೆಪ್ಟೆಂಬರ್ ಒಂದರಂದು ನಮ್ಮ ವಲಯದ ಅಕ್ಕಪಕ್ಕದಲ್ಲಿರುವ "ಬುದ್ಧಿಮಾಂದ್ಯ" ಮಕ್ಕಳನ್ನು ಸಲಹುತ್ತಿರುವ ಎರಡು ಸಂಸ್ಥೆಗಳನ್ನು ಗುರುತಿಸಿ ಅಲ್ಲಿನ ಸುಮಾರು 80 ಮಕ್ಕಳನ್ನು ಒಂದೆಡೆ ಸೇರಿಸಿ ಅವರಿಗೆ ಕ್ರೀಡಾಕೂಟವನ್ನು ಏರ್ಪಡಿಸಿ, ಅವರೊಂದಿಗೆ ಆಟ-ಕೂಟ-ಊಟಗಳಲ್ಲಿ ಪಾಲ್ಗೊಂಡು ಅವರೊಂದಿಗೆ ನಾವಿದ್ದೇವೆ ಅನ್ನುವ ಮನೋಭಾವನೆಯು ಅವರಿಗೆ ಬರುವಂತೆ ಒಂದು ದಿನ ನಾವೆಲ್ಲರೂ ಅವರೊಂದಿಗೆ ಕಳೆದ ಕ್ಷಣ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದೆ.
      ಮುಂದಿನ ದಿನಗಳಲ್ಲಿ ಅನಾಥ ಮಕ್ಕಳಿಗೆ ಒಂದು ದಿನದ ಸಂತಸ-ಕೂಟ-ಸ್ಪರ್ಧೆ ಏರ್ಪಡಿಸುವುದು. ಇತರ ಸಂಘ-ಸಂಸ್ಥೆಗಳೊಂದಿಗೆ ಸೇರಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುವುದು. ನಮ್ಮ ವೃತ್ತಿ ಭಾಂದವರಿಗಾಗಿ 'ಕಾರ್ಯಾಗಾರ'ಗಳನ್ನು ನಡೆಸುವುದು, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಸದಿಚ್ಛೆ.
      ಇತ್ತೀಚೆಗೆ ನಿಧನರಾದ ನಮ್ಮ ನೆಚ್ಚಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರಿಗೆ ಅವರ ನಿಧನದ ಬಗ್ಗೆ ಸಂತಾಪ ಸೂಚಕ ಸಭೆಯನ್ನು ನಡೆಸಿದ್ದೇವೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂಸ್ಮರಣೆಯನ್ನು ನಮ್ಮ ವಲಯದ ವತಿಯಿಂದ ಮಾಡಿದ್ದೇವೆ.
      ಮುಂದೆ ಜಿಲ್ಲಾ ಸಮಿತಿಯ 'ರಜತ ಸಂಭ್ರಮ'ದಲ್ಲಿ ನಮ್ಮ ವಲಯದ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಿದ್ಧರಾಗಿದ್ದೇವೆ.

Show more (+)

ಚಿತ್ರಸಂಪುಟ