ಕಾರ್ಕಳ ವಲಯ ನಡೆದು ಬಂದ ಹಾದಿ...

      ಕಾರ್ಕಳವನ್ನಾಳಿದ ಬೈರವ ಅರಸರ ನೆಲೆಬೀಡು ಶಿಲೆಯೊಳಗಿನಿಂದ ಕಲೆಯು ಹೊಮ್ಮಿಹುದು. ಕಳೆಯ ನೆಲೆಯಿದು. ಕಾರ್ಕಳವು ತಲೆಯೆತ್ತಿ ನಿಂತ ನಲವತ್ತೆರಡಡಿ ಎತ್ತರ ಕಾಲ ವಿಗ್ರಹವಿದು. ಗೋಮಟೇಶ್ವರನ ವಿಗ್ರಹ ಪಡುತಿರುಪತಿಯೆಂದೇ ಖ್ಯಾತವಾದ ಶ್ರೀ ವೆಂಕಟ್ರಮಣ ದೇವಸ್ಥಾನ. ವಿಶಾಲವಾದ ಪರ್ಪತಿ ಗುಡ್ಡೆಯ ತಟದಲ್ಲಿ ಅತ್ತೂರು ಚರ್ಚ್, ರಮಣೀಯ ಸೊಬಗನ್ನು ಮೀರುವ ಸುತ್ತಮುತ್ತಲ ಜಲಪಾತಗಳು ಹೀಗೆಯೇ ಕಾರ್ಕಳಕ್ಕೆ ವಿಶೇಷ ಸ್ಥಾನವಿದೆ.
      ಕಾರ್ಕಳದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಗೆ ಇಂದಿಗೆ 20 ರ ಸಂಭ್ರಮ, 20 ವರ್ಷಗಳಲ್ಲಿ ಒಟ್ಟು 12 ಮಂದಿ ಅಧ್ಯಕ್ಷರಾಗಿ ಉತ್ತಮ ಸೇವೆ ನೀಡಿದ್ದಾರೆ. ಮುಖ್ಯ ಕಾರಣ ಜಿಲ್ಲಾ ಮಟ್ಟದಲ್ಲಿ 25 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರ ಮಾರ್ಗದರ್ಶನ ಪ್ರೀತಿ ವಿಶ್ವಾಸವೇ ನಮ್ಮ ಸದಸ್ಯರ ಒಗ್ಗಟ್ಟಿಗೆ ಕಾರಣವಾಗಿದೆ.
      ಪ್ರಾಂಭದಲ್ಲಿ 6 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ವೈ. ಮೋಹನ್ ದಾಸ್ ಪೈಯವರು ತದನಂತರಗಳಲ್ಲಿ, ಸತೀಶ್ ಪಂಡಿತ್, ಮಹೇಂದ್ರ ಶೆಟ್ಟಿಯವರು 2 ವರ್ಷ ನಿರಂಜನ್ ಶೆಟ್ಟಿ, ಶೇಖರ್ ರಾವ್, ಶರತ್ ಕಾನಂಗಿ 2 ವರ್ಷ ಕೆ.ಎಂ.ಖಲೀಲ್, ಕೆ.ಪಿ. ಶಾಂಭವ, ಪದ್ಮಪ್ರಸಾದ್ ಜೈನ್, ದತ್ತಾತ್ರೇಯ ಹಿರಿಯಂಗಡಿ, ಜಗದೀಪ್ ಕುಮಾರ್, ಪ್ರಸಾದ್ ಕುಮಾರ್ 2015-2016 ಅಧ್ಯಕ್ಷರಾಗಿ ಪ್ರಸ್ತುತ ಶೇಖರ್ ರವರು ಮುಂದುವರಿಸುತ್ತಾ ಇಷ್ಟರವರೆಗೆ ಸದಸ್ಯರ ಕಷ್ಟ ಸುಖಗಳೊಂದಿಗೆ ಸ್ಪಂದಿಸುತ್ತಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದೇವೆ. ಹಬ್ಬ ಹರಿದಿನಗಳನ್ನು ಯಾವುದೇ ಮತ ಭೇದವಿಲ್ಲದೆ ಆಚರಿಸುತ್ತೇವೆ.

  • ನಮ್ಮ ವಲಯಕ್ಕೆ 2 ಬಾರಿ ಜಿಲ್ಲಾ ಪ್ರಶಸ್ತಿ ಬಂದಿರುತ್ತದೆ.
  • ವಲಯದ ವತಿಯಿಂದ ಜಿಲ್ಲಾ ಕೆಸರುಗದ್ದೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ಏರ್ಪಡಿಸಿರುತ್ತೇವೆ.
  • ರಕ್ತದಾನ
  • ನಮ್ಮ ಸದಸ್ಯರಿಗೆ ವೈದ್ಯಕೀಯ ಶಿಬಿರ ತುರ್ತುಪರಿಸ್ಥಿತಿಯ ಧನ ಸಹಾಯ
  • ಸದಸ್ಯರಿಗೆ ಕಾರ್ಯಾಗಾರ
  • ಚಿತ್ರ ಬಿಡಿಸುವ ಸ್ಪರ್ಧೆ
  • ಶಾಲೆಗಳಿಗೆ ಗ್ಯಾಸ್ ಕುಕ್ಕರ್ ವಿತರಣೆ
  • ಚೇತನಾ ವಿಶೇಷ ಶಾಲೆಯಲ್ಲಿ ಪ್ರತಿ ವರ್ಷ ಸ್ವಾತಂತ್ರೋತ್ಸವ ಆಚರಣೆ ಮತ್ತು ಫಲಹಾರ, ಊಟದ ವ್ಯವಸ್ಥೆ ನೀಡುತ್ತಾ ಬಂದಿರುವೆವು.
  • ಚೇತನಾ ಶಾಲೆಯಲ್ಲಿ ನಡೆಯುವ ಛಾಯಚಿತ್ರ ಹಾಗೂ ವಿಡಿಯೋ ಚಿತ್ರೀಕರಣ ಉಚಿತವಾಗಿ ನೀಡುತ್ತಾ ಬಂದಿರುವೆವು.
  • ಒಂದು ತಿಂಗಳು ರಾಮ ಸಮುದ್ರ ಸ್ವಚ್ಛತಾ ಆಂದೋಲನ ಸಾಲ್ವೇನಿಯಾ ಸಸ್ಯಗಳ ನಿರ್ಮೂಲನ ಹೊಸ ಸಂಜೆ ಬಳಗದೊಂದಿಗೆ ಉತ್ತಮ ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇವೆ. ಗ್ರಾಮಾಂತರ ಶಾಲೆ ಬೆಲ್ಮಾಣು ಶಾಲೆಗೆ ಪ್ರತಿ ವರ್ಷ ಎಲ್ಲಾ ಮಕ್ಕಳಿಗೆ ಎಲ್ಲಾ ಪುಸ್ತಕಗಳನ್ನು ನಮ್ಮ ವಲಯದಿಂದ ನೀಡಿರುತ್ತಾ ಬಂದಿರುವೆವು. ಮಾತ್ರವಲ್ಲ ಈ ಬಾರಿ ಬಡ 4 ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ನೀಡಿರುತ್ತೇವೆ.
  • ಆಟಿಡೊಂಜಿ ದಿನ, ಇಫ್ತಾರ್ ಕೂಟ ಆಚರಿಸುತ್ತೇವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ.
  • ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಕರಾಟೆ ಪಟುಗಳಿಗೆ ಅಭಿನಂದನಾ ಕಾರ್ಯಕ್ರಮ ವಿಶೇಷ ಶಾಲೆಯ ಶಿಕ್ಷಕರಿಗೆ, ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯನ್ನು 2 ಬಾರಿ ಆಚರಿಸುತ್ತಾ ಬಂದು ಕಾಫೀ, ಊಟ, ಫೋಟೋ, ವಿಡಿಯೋ, ಉಚಿತ ನೀಡುತ್ತಾ ಮಾತ್ರವಲ್ಲ ಆ ದಿನದ ವಿವಿಧ ಸ್ಪರ್ಧೆಗಳನ್ನು ನಾವೇ ಸಂಘಟಿಸಿರುವುದು ನಮಗೆ ಹೆಮ್ಮೆಯ ವಿಷಯ.

ನಮ್ಮ ವಲಯಕ್ಕೆ ಬಂದ ಪ್ರಶಸ್ತಿಗಳು:

  • ಉತ್ತಮ ವಲಯ ಪ್ರಶಸ್ತಿ 2 ಬಾರಿ ಬಂಟ್ವಾಳ ವಲಯವು ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಿದರಲ್ಲಿ ಪ್ರಥಮ ಪ್ರಶಸ್ತಿ, ಉತ್ತಮ ನಿರೂಪಣೆ ಪ್ರಥಮ.
  • ಕ್ರೀಡೆ ಉಡುಪಿ ವಲಯ, ಕುಂದಾಪುರ ವಲಯ, ಪುತ್ತೂರು ವಲಯದಲ್ಲಿ 4 ಬಾರಿ, ಮೂಡಬಿದ್ರೆ ವಲಯಗಳಲ್ಲಿ ಕ್ರಿಕೆಟ್ ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತೇವೆ.
  • ಜಿಲ್ಲಾ ಕ್ರೀಡಾಕೂಟದಲ್ಲಿ ವಾಲಿಬಾಲ್ 2 ಬಾರಿ.
  • ಬಂಟ್ವಾಳ ವಲಯದ ಹೊನಲು ಬೆಳಕಿನ ವಾಲಿವಾಲ್ ಪ್ರಥಮ ಸ್ಥಾನ.
  • ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ.
  • ಕ್ರಿಕೆಟ್ ನಲ್ಲಿ ನಮ್ಮ ವಲಯವು ಇಷ್ಟರವರೆಗೆ ಮುಂಚೂಣಿಯಲ್ಲಿದೆ.
  • ಪ್ರತಿ ವಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾ ಬಂದಿರುವೆವು.
  • ರೋಟರಿ ಕ್ಲಬ್, ರೋಟರಾಕ್ಟ್ ಕ್ಲಬ್, ಲಯನ್ಸ್ ಕ್ಲಬ್, ಹಾಗೂ ಜೇಸಿಸ್ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದೇವೆ.
  • ಶ್ರಮ ಸ್ಫೂರ್ತಿ ಸಾಧನೆ, ಸರ್ವ ಸದಸ್ಯರ ಸಹಕಾರದಿಂದಾಗಿ 20 ವರ್ಷ ಕಾರ್ಕಳದ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಸಂಭ್ರಮವನ್ನು ಆಚರಿಸುತ್ತಿದೆ.
  • ನಮ್ಮ ಎಸ್.ಕೆ.ಪಿ.ಎ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕೋ. ಓಪರೇಟಿವ್ ಸೊಸೈಟಿಯಲ್ಲಿ 5 ಲಕ್ಷ ಡೆಪೋಸಿಟ್ ಹಾಗೂ 3 ಲಕ್ಷ ಶೇರು ಇದೆ.

Show more (+)