ಕುಂದಾಪುರ ವಲಯವು ನಡೆದು ಬಂದ ದಾರಿ ...

      ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ದ.ಕ. ಉಡುಪಿ ಇದರ ಕುಂದಾಪುರ ವಲಯವು 21 ವರ್ಷಗಳ ಹಿಂದೆ ಆರಂಭಗೊಂಡು ಬಲಿಷ್ಠ ಸಂಘಟನೆಯಾಗಿ ರೂಪುಗೊಂಡಿದೆ ಎನ್ನಲು ಹೆಮ್ಮೆಪಡುತ್ತೇವೆ.
      ಶ್ರೀಧರ ಹೆಗ್ಡೆ ಇವರು ಸ್ಥಾಪಕ ಅಧ್ಯಕ್ಷರಾಗಿ ಸಂಘವು ಪ್ರಾರಂಭಗೊಂಡು ತದನಂತರ ಅಶೋಕ್ ಕುಮಾರ್ ಶೆಟ್ಟಿ, ಗೋವಿಂದ ದೇವಾಡಿಗ, ರಾಬರ್ಟ್ ಡಿಸೋಜಾ, ಸುರೇಶ್ ಸುರಭಿ, ಉದಯ್ ಪಡಿಯಾರ್, ದಿನೇಶ್ ಗೋಡೆ, ಗಣೇಶ್ ಬೆನಕ, ಗಣೇಶ್ ಪಿ. ಗಂಗೊಳ್ಳಿ, ಗಿರೀಶ್ ಜಿ.ಕೆ, ಸುದರ್ಶನ್ ಶಲ್ಯ, ಹರೀಶ್ ಗುರುಕೃಪ, ನಾಗರಾಜ ರಾಯಪ್ಪನ ಮಠ ಅಧ್ಯಕ್ಷರುಗಳಾಗಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿರುತ್ತಾರೆ.
      ಸಂಸ್ಥೆಯಲ್ಲಿ ಸುಮಾರು 350 ಜನ ಸದಸ್ಯರನ್ನೊಳಗೊಂಡಿದ್ದು, ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಅತಿ ದೊಡ್ಡ ವಲಯವಾಗಿದೆ. ನಮ್ಮ ಸದಸ್ಯರು ಛಾಯಾಗ್ರಹಣದೊಂದಿಗೆ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿರುತ್ತಾರೆ. ಗ್ರಾಮಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ರೋಟರಿ, ಲಯನ್ಸ್, ಜೇಸಿಐ ಸೇರಿದಂತೆ ಕುಂದಾಪುರದ ಪ್ರತಿಷ್ಠಿತ ಸಂಘಸಂಸ್ಥೆಗಳಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆಸಲ್ಲಿಸಿ ಜನಮನ್ನಣೆ ಗಳಿಸಿರುವುದು ನಮ್ಮ S.K.P.A ಸಂದ ಗೌರವ ಸಂಘದ ಸದಸ್ಯರು ವೃತ್ತಿ ಸಂಬಂಧ ತೊಂದರೆಗೊಳಗಾದಾಗ, ಅಪಘಾತಕ್ಕೊಳಗಾದಾಗ ಸ್ಥಳಕ್ಕೆ ಧಾವಿಸಿ ಅವರಿಗೆ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಕಾನೂನು ಸಮಸ್ಯೆಗಳಿಗೆ ಸ್ಪಂದನೆ ನೀಡಿರುತ್ತೇವೆ.
      ಸಮಾಜದ ದುರ್ಬಲ ಜನರಿಗೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಕಾರವನ್ನು ನೀಡಿರುತ್ತೇವೆ.

      HIV ಪೀಡಿತ ಮಹಿಳೆಯರು ಸ್ವದ್ಯೋಗ ನಡೆಸಲು ಹೊಲಿಗೆ ಯಂತ್ರ ನೀಡಿರುತ್ತೇವೆ. ಅವರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಿರುತ್ತೇವೆ. ಸಮಾಜದಲ್ಲಿ ಎಲೆಮರೆಯ ಕಾಯಿಗಳಾಗಿ ದುಡಿಯುವ ಸಾಹಿತಿಗಳು, ಪ್ರತಿಭಾವಂತರನ್ನು ಗುರುತಿಸಿರುತ್ತೇವೆ. ಪ್ರತಿಯೊಂದು ನಾಡ ಹಬ್ಬಗಳನ್ನು ಆಚರಿಸಿರುತ್ತೇವೆ.
      ರಜತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ರಾಜ್ಯದ ಇತಿಹಾಸದ ಮೊದಲ ಬಾರಿಗೆ ಸುಮಾರು 800 ಜನ ನೇತ್ರದಾನ ಘೋಷಣೆಯನ್ನು ಮಾಡುವ ಮೂಲಕ ರಜತಮಹೋತ್ಸವಕ್ಕೆ ಕಳೆ ತಂದಿರುತ್ತೇವೆ.
      ಕ್ರೀಡಾ ಕ್ಷೇತ್ರದಲ್ಲಿಯೂ ಕೂಡ ನಮ್ಮದೇ ಛಾಪನ್ನು ಮೂಡಿಸಿದ ನಾವು ಹಲವಾರು ಪ್ರಶಸ್ತಿಗಳನ್ನು ನಮ್ಮ ಮುಡಿಗೇರಿಸಿರುತ್ತೇವೆ. ನಮ್ಮ ವಲಯದ ಸದಸ್ಯರಾದ ಅಶೋಕ ಕುಮಾರ್ ಶೆಟ್ಟಿ ಯವರು ಎರಡು ಬಾರಿ S.K.P.A ಜಿಲ್ಲಾ ಅಧ್ಯಕ್ಷರಾಗಿ ರಾಜ್ಯದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದು ಹೆಮ್ಮೆಯ ಸಂಗತಿ. ನಮ್ಮೆಲ್ಲ ಕಾರ್ಯಚಟುಚಟಿಕೆಗೆ ನಮ್ಮ ಸಂಘದ ಸದಸ್ಯರು, S.K.P.A ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸುತ್ತೇವೆ.

Show more (+)

ಕುಂದಾಪುರ ವಲಯವನ್ನು ಮುನ್ನಡೆಸಿದ ಸಾರಥಿಗಳು

flag

           ದಿನೇಶ್

flag

           ಗಣೇಶ್

flag

           ಗಣೇಶ್

flag

           ಗಿರೀಶ್

flag

           ಹರೀಶ್

flag

           ನಾಗರಾಜ್

flag

   ರಾಬರ್ಟ್ ಡಿಸೋಜ

flag

          ಶ್ರೀಧರ್

flag

          ಸುದರ್ಶನ್

flag

          ಸುರೇಶ್

flag

  ಉದಯ ಪಡಿಯಾರ್

ಚಿತ್ರಸಂಪುಟ

ಸಮಾಜ ಸೇವಾ ಕಾರ್ಯಕ್ರಮಗಳು