ಕಾಪು ವಲಯ ನಡೆದು ಬಂದ ಹಾದಿ ...

      ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್(ರಿ.) ಮಂಗಳೂರು-ಉಡುಪಿ ಜಿಲ್ಲೆ.
      1992-93 ನೇ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್(ರಿ.) ಕಾಪು ವಲಯವು ಎಸ್.ಕೆ.ಪಿ.ಎ ಯ ಸ್ಥಾಪಕ ಅಧ್ಯಕ್ಷ ದಿ. ಆರ್.ಬಿ ಸನಿಲ್ ಇವರ ನೇತೃತ್ವದಲ್ಲಿ, 14 ಮಂದಿ ಸದಸ್ಯರೊಂದಿಗೆ ಆರಂಭಗೊಂಡಿತು. ಕಾಪು ವಲಯದ ಪ್ರಥಮ ಸಭೆಯು ಕಾಪು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಸಭಾಂಗಣದಲ್ಲಿ ಜರಗಿದ್ದು, ಈ ಸಭೆಯ ತೀರ್ಮಾನದಂತೆ ಕಾಪು ವಲಯದ ಪ್ರಪ್ರಥಮ ಅಧ್ಯಕ್ಷಗಾದಿಯನ್ನು ಹಿಡಿದವರು ಲಕ್ಷ್ಮಣ್ ಸುವರ್ಣ, ಕಾಪು. ಉಪಾಧ್ಯಕ್ಷರಾಗಿ ಫ್ರಾನ್ಸಿಸ್ ಡೇಸಾ, ಪ್ರ.ಕಾರ್ಯದರ್ಶಿಯಾಗಿ ಭಕ್ತ ಪ್ರಸಾದ್ ಕಾಪು, ಕೋಶಾಧಿಕಾರಿಯಾಗಿ ಕರುಣಾಕರ್ ನಾಯಕ್ ನೇಮಕಗೊಂಡರು.
      ಆ ಬಳಿಕ ಮುಂದಿನ ದಿನಗಳಲ್ಲಿ ಕಾಪು, ಉಡುಪಿ, ಬ್ರಹ್ಮಾವರ ಈ ಮೂರು ಪರಿಸರದಲ್ಲಿನ ಸದಸ್ಯರೆಲ್ಲಾ ಒಂದಾಗಿ "ಉಡುಪಿ ವಿಭಾಗ" ರಚನೆಯಾಯಿತು. ಉಡುಪಿ ವಿಭಾಗದಲ್ಲೂ ಕಾಪು ವಲಯದ ಪದಾಧಿಕಾರಿಗಳು ಸೇರ್ಪಡೆಗೊಂಡರು. ಉಡುಪಿ ವಿಭಾಗವಾಗಿ ಬಹಳಷ್ಟು ವರ್ಷಗಳ ಕಾಲ ಕಾರ್ಯಾಚರಿಸಿದ ಬಳಿಕ ಸದಸ್ಯರ ಸಂಖ್ಯೆ ವೃದ್ಧಿಯಾಗುತ್ತಿದ್ದಂತೆ ಮತ್ತೆ ವಲಯವಾರು ವಿಂಗಡಣೆಗೊಂಡು ಕಾಪು ವಲಯ ಪ್ರತ್ಯೇಕ ವಲಯವಾಗಿ ಕಾರ್ಯಾರಂಭಗೊಳಿಸಿತು.

      ಎಸ್.ಕೆ.ಪಿ.ಎ ಮಾತೃಸಂಸ್ಥೆಯು ಸಂಘಟನಾತ್ಮಕವಾಗಿ ಬೆಳೆಯುತ್ತಿದ್ದಂತೆ ವಲಯ ಪ್ರಶಸ್ತಿ ಯೋಜನೆಯ ಪ್ರಥಮ ಘೋಷಣೆಯಲ್ಲಿಯೇ ನಮ್ಮೀ ಕಾಪು ವಲಯಕ್ಕೆ "ವಲಯ ಪ್ರಶಸ್ತಿ" ದೊರಕಿರುವುದು ನಮ್ಮ ವಲಯದ ಉತ್ತಮ ಕಾರ್ಯಚಟುವಟಿಕೆಗಳಿಗೆ ಹಿಡಿದ ಕೈಗನ್ನಡಿಯಂತಾಗಿದೆ. "ಬೆಳೆವ ಸಿರಿ ಮೊಳಕೆಯಲ್ಲಿ" ಎಂಬಂತೆ ಆ ಬಳಿಕದ ದಿನದಲ್ಲೂ ವಲಯದ ಎಲ್ಲಾ ಸದಸ್ಯರ ಸಲಹೆ ಸಹಕಾರದಿಂದ ಎಲ್ಲಾ ಮಜಲುಗಳಲ್ಲೂ ಕೈಯಾಡಿಸುತ್ತ ಬಂದ ನಾವು ಯಶಸ್ಸು ಸಾಧಿಸಿದ್ದೆವು. ವರ್ಷಾಂಪ್ರತಿ ನಡೆಯುವ ಜಿಲ್ಲಾ ಮತ್ತು ವಲಯವಾರು ಕ್ರೀಡಾಕೂಟಗಳಲ್ಲಿ ನಮ್ಮ ವಲಯವು ಹಲವಾರು ಬಾರಿ ಚಾಂಪಿಯನ್ ಆಗಿ ಮೂಡಿ ಬಂದಿರುವುದೇ ಇದಕ್ಕೆ ಸಾಕ್ಷಿ.
      ಕೇವಲ 14 ಸದಸ್ಯರಿಂದ ಆರಂಭಗೊಂಡ ನಮ್ಮೀ ಸಂಸ್ಥೆ ಇದೀಗ 150 ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಈ ಸದಸ್ಯರೆಲ್ಲರೂ ಫೋಟೋಗ್ರಾಫಿಯನ್ನು ಜೀವನೋಪಾಯಕ್ಕಾಗಿ ಉದ್ಯಮವನ್ನಾಗಿಸಿಕೊಂಡು ಮುನ್ನಡೆಸಿಕೊಂಡು ಬರುತ್ತಿದ್ದು, ನಮ್ಮೀ ಎಲ್ಲಾ ಸದಸ್ಯರ ಸಹಕಾರದಿಂದ ಬಡ ಬಗ್ಗರ ಕಷ್ಟದಲ್ಲಿ ಪಾಲು ಪಡೆದುಕೊಂಡು ಸಾಮಾಜಿಕವಾಗಿ ನಮ್ಮಿಂದಾದ ಸಹಕಾರವನ್ನು ನೀಡುತ್ತಾ ಬಂದಿದ್ದು ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುವ ಇರಾದೆ ನಮ್ಮದ್ದಾಗಿದೆ.
      ಪ್ರಸ್ತುತ ವರ್ಷದಲ್ಲಿ ನಮ್ಮೀ ಸಂಘಟನೆಯು ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ನಡೆಸಲಿದ್ದು ಈ ಸಂದರ್ಭ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಯೋಚನೆಗಳಿವೆ. ನಮ್ಮ ಯೋಚನೆಗಳನ್ನು ಯೋಜನೆಗಳನ್ನಾಗಿ ಪರಿವರ್ತಿಸಿಕೊಂಡು ಸಂಸ್ಥೆಯ ಕೀರ್ತಿಯನ್ನು ಎತ್ತರಕ್ಕೇರಿಸಲು ತಮ್ಮೆಲ್ಲರ ಸಲಹೆ ಸಹಕಾರವನ್ನು ಬಯಸುತ್ತೇವೆ.

Show more (+)

ವಲಯವನ್ನು ಮುನ್ನಡೆಸಿದ ಸಾರಥಿಗಳು.

flag

ಲಕ್ಷ್ಮಣ್ ಸುವರ್ಣ

flag

ವಾಸುದೇವ ರಾವ್

flag

ಪ್ರವೀಣ್ ಬಲ್ಲಾಳ್

flag

ಸುಬ್ರಹ್ಮಣ್ಯ ಐತಾಳ್

ಚಿತ್ರಸಂಪುಟ

ನಮ್ಮ ಸಂಘದಿಂದ ಸೇವಾ ಕಾರ್ಯಕ್ರಮಗಳು