ಸುಳ್ಯ ವಲಯ ನಡೆದು ಬಂದ ಹಾದಿ...

      S.K.P.A ದ.ಕ - ಉಡುಪಿ ಅವಿಭಜಿತ ಜಿಲ್ಲೆಯಲ್ಲಿ ಕುಂದಾಪುರದಿಂದ ಸುಳ್ಯದವರೆಗೆ ಹೋಲಿಸಿದಾಗ ಜಿಲ್ಲೆಯ ಒಂದು ಮೂಲೆಯಲ್ಲಿರುವ ವಲಯವೆಂದರೆ ಅದು ಸುಳ್ಯ ವಲಯ. ಸದಸ್ಯರ ಸಂಖ್ಯೆಯಲ್ಲಿ ಕಡಿಮೆಯಾದರೂ ವಿಸ್ತೀರ್ಣದಲ್ಲಿ ಅತೀ ದೊಡ್ಡ ವಲಯವೆಂದೇ ಹೇಳಬಹುದಾಗಿದೆ. ಹೆಚ್ಚಿನ ಸದಸ್ಯರು ವೃತ್ತಿಯ ಜೊತೆಗೆ ಕೃಷಿಕರೂ ಆಗಿದ್ದಾರೆಂಬುದು ಹೆಮ್ಮೆಯ ವಿಚಾರ. ಆಧುನಿಕ ಜಗತ್ತಿನಲ್ಲಿ ತಾಂತ್ರಿಕತೆ ಬೆಳೆದ ಹಾಗೆ ಛಾಯಾಗ್ರಾಹಕರ ಸಂಖ್ಯೆಯು ಬೆಳೆಯುತ್ತಾ ಬಂದು ಇಂದು ನಮ್ಮ ಸುಳ್ಯ ವಲಯದಲ್ಲಿ ಸರಿ ಸುಮಾರು 80 ಕ್ಕಿಂತ ಅಧಿಕ ಸದಸ್ಯರಿದ್ದಾರೆ.
      ಅಂದಿನ ಆ ಕಾಲದಿಂದ ಇಂದಿನ ನಮ್ಮ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಸುದಿನದವರೆಗೆ ನಮ್ಮ ಸುಳ್ಯ ವಲಯ ಬೆಳೆದು ಬಂದ ದಾರಿಯ ಒಂದು ಹಿನ್ನೋಟ. ಸುಳ್ಯದಲ್ಲಿ ಗೋಪಾಲ್ ಸ್ಟುಡಿಯೋ ಮಾಲಕರಾದ ಶ್ರೀ. ಗೋಪಾಲಕೃಷ್ಣರವರು ತುಂಬಾ ಹಿರಿಯ ಛಾಯಾಗ್ರಾಹಕರಾಗಿದ್ದು ಸುಳ್ಯದಿಂದ ದೂರ ದೂರದ ಊರುಗಳಲ್ಲಿರುವ ಹೊಸ ಹೊಸ ಛಾಯಾಗ್ರಾಹಕರನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಆಗಿನ ಕಾಲದಲ್ಲಿ ಮೊಬೈಲ್ ವ್ಯವಸ್ಥೆ ಇಲ್ಲದಿದ್ದುದರಿಂದ ದೂರವಾಣಿ ಅಥವಾ ಅಂಚೆ ಕಾರ್ಡುಗಳೇ ನಮ್ಮ ಛಾಯಾಗ್ರಾಹಕರ ಸಂಪರ್ಕ ವ್ಯವಸ್ಥೆಗೆ ಆಧಾರವಾಗಿದ್ದವು. ಗೋಪಾಲಣ್ಣನವರ ಆಗಿನ ಕಾಲದ ಹಳೆಯ ಕಟ್ಟಡದ ಸ್ಟುಡಿಯೋದಲ್ಲಿ ವಿಸ್ತಾರವಾದ ಜಾಗವಿದ್ದುದರಿಂದ ನಮ್ಮ ಸಭೆ ಕಾರ್ಯಕ್ರಮಗಳು ಅವರ ಸ್ಟುಡಿಯೋದಲ್ಲಿಯೇ ನಡೆಯುತ್ತಿದ್ದವು. ಅವರು ಸಭಾ ಕಾರ್ಯಕ್ರಮಗಳ ಮುಂದಾಳತ್ವ, ಯುವ ಛಾಯಾಗ್ರಾಹಕರಿಗೆ ಮಾರ್ಗದರ್ಶಕರಾಗಿದ್ದುದರಿಂದ ನಾವೆಲ್ಲರೂ ಅವರನ್ನು ನಮ್ಮ ಸ್ಥಾಪಕ ಅಧ್ಯಕ್ಷರೆಂದು ಬಿಂಬಿಸಿಕೊಂಡಿದ್ದೆವು. ಅಲ್ಲದೆ ಇನ್ನೊಬ್ಬ ಛಾಯಾಗ್ರಾಹಕ ಇಂದು ಮಣ್ಣಲ್ಲಿ ಮಣ್ಣಾಗಿರುವ ಸುಬ್ರಹ್ಮಣ್ಯದ ದಿ. ಕೆ.ಎಸ್. ಮೂರ್ತಿಯವರು ನಮ್ಮ ಸಂಘದ ಗೌರವಾಧ್ಯಕ್ಷರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು. ಸುಳ್ಯದ ಗೋಪಾಲಣ್ಣನವರ ಕರ್ತವ್ಯ ನಿಷ್ಠೆ, ಸಂಘಟನಾ ಶೈಲಿಯನ್ನು ಪರಿಗಣಿಸಿದ ಜಿಲ್ಲಾ ನಾಯಕರುಗಳು ಅವರನ್ನು 2004 ರಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದರು. ಅವರು ಜಿಲ್ಲಾಧ್ಯಕ್ಷರಾದ ಒಂದು ವರ್ಷದಲ್ಲಿ ಅಂದರೆ 2005 ರಲ್ಲಿ ಅವರ ನೇತೃತ್ವದಲ್ಲಿ ಮಂಗಳೂರಿನ ಸ್ವಂತ ಕಟ್ಟಡವಾದ 'ಛಾಯಾ ಭವನ' ಸ್ಥಾಪಿಸಲಾಯಿತು.
      ಕೆ ಗೋಪಾಲಕೃಷ್ಣರವರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಂತರ ಸುಳ್ಯ ವಲಯದ ಜವಾಬ್ದಾರಿಯನ್ನು ಬೆಳ್ಳಾರೆಯ ಲಕ್ಷ್ಮೀನಾರಾಯಣರವರು ವಹಿಸಿಕೊಂಡು ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ನಮ್ಮ ಸಂಘಟನೆಯನ್ನು ಇನ್ನಷ್ಟು ಬಲ ಪಡಿಸಿದರು. ಅವರ ನಂತರ ಪ್ರಸಾದ್ ಕೆಮ್ಮಿಂಜೆಯವರು ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು.

      ಪ್ರಸಾದ್ ರವರ ಅವಧಿಯ ನಂತರ ಗುತ್ತಿಗಾರಿನ ಬಾಲಕೃಷ್ಣರವರು 2008 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಿದರು. ಅಪಘಾತ ಮತ್ತು ಅನಾರೋಗ್ಯಕ್ಕೆ ಒಳಗಾದ ಅಥವಾ ಯಾವುದೇ ಸಂದರ್ಭದಲ್ಲಿ ನಮ್ಮ ಸದಸ್ಯರ ಸ್ಟುಡಿಯೋಗಳಿಗೆ ಹಾನಿಯಾದ ತಕ್ಷಣ ನಮ್ಮ ವಲಯದಿಂದಲೇ ಪರಿಹಾರ ಒದಗಿಸಿಕೊಡುವ ವ್ಯವಸ್ಥೆಗಾಗಿ "ಕ್ಷೇಮ ನಿಧಿ" ಎಂಬ ಒಂದು ಉತ್ತಮ ಯೋಜನೆಯನ್ನು ಜಾರಿಗೆ ತಂದ ಕೀರ್ತಿ ಬಾಲಕೃಷ್ಣರವರಿಗೆ ಸಲ್ಲುತ್ತದೆ. ಅವರ ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುಬ್ರಹ್ಮಣ್ಯದ ಲೋಕೇಶ್ ಬಿ.ಎನ್ ರವರು ನಂತರ 2010 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅವರು ಕೂಡಾ ಈ ಕ್ಷೇಮ ನಿಧಿ ಯೋಜನೆಯನ್ನು ಮುಂದುವರಿಸಿದರು. ಕ್ಷೇಮ ನಿಧಿಯಿಂದ ನಮ್ಮ ವಲಯದ ಕೆಲವು ನೊಂದ ಸದಸ್ಯರಿಗೆ ಪರಿಹಾರವನ್ನು ಕೊಡಲಾಯಿತು. ಹಾಗೂ ಅಪಘಾತ ಹಾಗೂ ಬೆಂಕಿ ಅನಾಹುತಕ್ಕೆ ಒಳಗಾದ ಇಬ್ಬರಿಗೆ ನಮ್ಮ ಸದಸ್ಯರಿಂದ ಸಂಗ್ರಹವಾದ ಮೊತ್ತವನ್ನು ಪರಿಹಾರವಾಗಿ ನೀಡಿದ ಹೆಗ್ಗಳಿಕೆ ನಮ್ಮ ಸುಳ್ಯ ವಲಯದ್ದಾಗಿದೆ.
      ನಂತರದ 2012 ರಲ್ಲಿ ಅಧ್ಯಕ್ಷರಾಗಿ ಪರಮೇಶ್ವರರವರು ಆಯ್ಕೆಯಾದರು. ಇವರ ಅಧಿಕಾರ ಅವಧಿಯಲ್ಲಿ ಸುಳ್ಯ ವಲಯದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘದ ಏಳಿಗೆಗಾಗಿ ಶ್ರಮಿಸಿದರು. ಪರಮೇಶ್ವರರವರ ಅಧಿಕಾರಾವಧಿಯ ನಂತರ 2014 ರಲ್ಲಿ ಸುಳ್ಯ ವಲಯದ 7 ನೇ ಅಧ್ಯಕ್ಷರಾಗಿ ಶ್ರೀ. ಕರುಣಾಕರ್ ಎಣ್ಣೆಮಜಲು ಆಯ್ಕೆಯಾದರು. ಶ್ರೀಯುತರು ಅಧಿಕಾರ ಅವಧಿಯಲ್ಲಿ ಸುಳ್ಯ ವಲಯವನ್ನು ಉತ್ತಮ ವಲಯವನ್ನಾಗಿ ರೂಪಿಸುವ ಯೋಜನೆಯನ್ನು ಹಾಕಿಕೊಂಡು, ಜಿಲ್ಲಾಧ್ಯಕ್ಷರಾದ ಶ್ರೀ. ಕೆ. ವಾಸುದೇವ್ ರಾವ್ ಅವರ ಮಾರ್ಗದರ್ಶನದಂತೆ ಈಗಾಗಲೇ ಜನಪರ ಯೋಜನೆಗಳ ಮುಖಾಂತರ ಸುಳ್ಯ ವಲಯ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Show more (+)

ಸುಳ್ಯ ವಲಯವನ್ನು ಮುನ್ನಡೆಸಿದ ಸಾರಥಿಗಳು.

flag

 ಗೋಪಾಲ್ ಸುಳ್ಯ

flag

ಲಕ್ಷೀನಾರಾಯಣ ಬೆಳ್ಳಾರೆ

flag

ಪ್ರಸಾದ್ ಕೆಮ್ಮಿಂಜೆ

flag

ಬಾಲಕೃಷ್ಣ ಗುತ್ತಿಗಾರು

flag

ಲೋಕೇಶ್ ಸುಬ್ರಹ್ಮಣ್ಯ

flag

ಪರಮೇಶ್ವರ ಸುಳ್ಯ

flag

ಕರುಣಾಕರ್ ಎಣ್ಣೆಮಜಲು (ಹಾಲಿ ಅಧ್ಯಕ್ಷ)

ಚಿತ್ರಸಂಪುಟ

ನಮ್ಮ ಸಂಘದಿಂದ 2014-15 ರಲ್ಲಾದ ಸಾಧನೆ - ಕೆಲಸಗಳು.