ಪುತ್ತೂರು ವಲಯ ಹೊಸ ಹೆಜ್ಜೆಯೊಂದಿಗೆ ನಡೆದು ಬಂದ ಹಾದಿ...

      24 ವರ್ಷಗಳ ಹಿಂದೆ 1992 ರಲ್ಲಿ ಸ್ಥಾಪನೆಯಾದ ಪುತ್ತೂರು ತಾಲೂಕಿನ 13 ಛಾಯಾಗ್ರಾಹಕರು ಸೇರಿ, ಚೇತನಾ ಸ್ಟುಡಿಯೋದ ಕೇಶವ ಭಟ್ಟ್ ಹಾಗೂ ಅರ್ಚನಾ ಸ್ಟುಡಿಯೋದ ಪೊನ್ನಪ್ಪರವರ ನೇತೃತ್ವದಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಪುತ್ತೂರು ವಲಯ ಛಾಯಾಗ್ರಾಹಕರ ಸಂಘ. ಆ ದಿನಗಳಲ್ಲೂ ಕೂಡ ಛಾಯಮಿತ್ರರನ್ನು ತಾಲೂಕಿನಾದ್ಯಂತ ಒಗ್ಗೂಡಿಸಿ, ಕೇಂದ್ರ ಸಮಿತಿಯೊಂದಿಗೆ ವಿಲೀನಗೊಳಿಸಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಶನ್ ನ ಒಂದು ಭಾಗವಾಗಿ ಕೆಲಸ ನಿರ್ವಹಿಸಿದೆ.
      ವಲಯದ ಸ್ಥಾಪಕ ಅಧ್ಯಕ್ಷರಾಗಿ ಶ್ರೀಯುತ ಕೇಶವ ಭಟ್ಟ್ ಕೆಲಸ ನಿರ್ವಹಿಸಿದ್ದು ಕೇಂದ್ರ ಸಮಿತಿ ನೀಡಿದ ದರ ಪಟ್ಟಿಯನ್ನು ಆ ದಿನಗಳಲ್ಲಿ ತಾಲೂಕಿನಾದ್ಯಾಂತ ಕಾರ್ಯಗತಗೊಳಿಸಿದ ಪ್ರಥಮ ವಲಯ ಪುತ್ತೂರು ವಲಯವಾಗಿರುತ್ತದೆ. ನಂತರದ 2 ವರ್ಷಗಳ ಕಾಲ ಅಧ್ಯಕ್ಷರಾಗಿ ಪ್ರಭು ಸ್ಟುಡಿಯೋದ ಶ್ರೀನಿವಾಸ ಪ್ರಭು ಕಾರ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ವಲಯದ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ "Light & Shadow" (ಛಾಯಾಗ್ರಹಣದ ಅರಿವನ್ನು ಮೂಡಿಸಿದ್ದಾರೆ. ಆ ನಂತರದ 3 ವರ್ಷಗಳ ಅವಧಿಗೆ ಶೈನಿ ಸ್ಟುಡಿಯೋದ ಶಾಂತ ಕುಮಾರ್ ರವರು ಅಧ್ಯಕ್ಷರಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಎಲ್ಲಾ ವಲಯಗಳ ಸದಸ್ಯರನ್ನು ಸೇರಿಸಿಕೊಂಡು ಕ್ರೀಡಾಕೂಟ ನಡೆಸಿದ ಪುತ್ತೂರು ವಲಯ ನಂತರದ ಅವಧಿಯಲ್ಲಿ ಪದ್ಮ ಸ್ಟುಡಿಯೋದ ಸುದರ್ಶನ್ ರಾವ್ ಮತ್ತು ಕಾರ್ಯದರ್ಶಿಯಾಗಿ ಬಿ. ಸುಧಾಕರ್ ಶೆಟ್ಟಿಯವರು ಕಾರ್ಯನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಛಾಯಾಗ್ರಾಹಕರ ದಿನದಂದು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು. ಮುಂದಿನ ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ರಮ್ಯ ಸ್ಟುಡಿಯೋದ ಶಿವರಾಮ್ ಕಡಬ ಮತ್ತು ಕಾರ್ಯದರ್ಶಿಯಾಗಿ ಚೇತನಾ ಸ್ಟುಡಿಯೋದ ಅಶೋಕ್ ಕುಂಬ್ಳೆ ಕಾರ್ಯ ನಿರ್ವಹಿಸಿದ್ದರು. ಇವರ ಅವಧಿಯಲ್ಲಿ ವಲಯದ ಎಲ್ಲಾ ಸದಸ್ಯರೊಡಗೂಡಿ ಪ್ರವಾಸ ಮತ್ತು ಛಾಯಾಗ್ರಹಣಕ್ಕೆ ಸಂಬಂಧಪಟ್ಟ ಮಾಹಿತಿ ಶಿಬಿರವನ್ನು ಆಯೋಜಿಸಿದ್ದರು. ನಂತರದ ಅವಧಿಗೆ ಅಧ್ಯಕ್ಷರಾಗಿ ಎಂ.ನಾರಾಯಣ್ ಕಾರ್ಯದರ್ಶಿಯಾಗಿ ಪ್ರೀತಂ ಇವರು ಕಾರ್ಯನಿರ್ವಹಿಸಿರುತ್ತಾರೆ.

      ಈ ಅವಧಿಯಲ್ಲಿ ಛಾಯಾಗ್ರಾಹಕರ ಕುಟುಂಬ ಸಮ್ಮಿಲನ ನಡೆಸಿದ ಮೊದಲ ವಲಯವಾಗಿ ಪುತ್ತೂರು ವಲಯ ಜಿಲ್ಲೆಯಲ್ಲೆ ಗುರುತಿಸಲ್ಪಟ್ಟಿತು. ತದನಂತರದ 2 ವರ್ಷಗಳ ಅವಧಿಯಲ್ಲಿ ಅಧ್ಯಕ್ಷರಾಗಿ ಕರುಣಾಕರ ಗೌಡ ಎಲಿಯ ಕಾರ್ಯದರ್ಶಿಯಾಗಿ ನವೀನ್ ರೈ ಪಂಜಳ ಇವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಅನಧಿಕೃತ ಛಾಯಾಗ್ರಾಹಕರು ಪಾಸ್ ಪೋರ್ಟ್ ಅಳತೆಯ ಫೋಟೋ ತೆಗೆಯುವ ಬಗ್ಗೆ ಆಂದೋಲನ ನಡೆಸಿ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲೆಗಳಲ್ಲಿ ಖಡ್ಡಾಯವಾಗಿ ಪಾಸ್ ಪೋರ್ಟ್ ಅಳತೆಯ ಫೋಟೋ ತೆಗೆಯದಂತೆ ಸರಕಾರದ ಪ್ರತಿಯನ್ನು ಶಿಕ್ಷಣಾಧಿಕಾರಿಗಳ ಮುಖೇನವಾಗಿ ಶಾಲೆಗಳಿಗೆ ಕಳುಹಿಸಿಕೊಡುವಲ್ಲಿ ಪುತ್ತೂರು ವಲಯ ಸಫಲವಾಗಿದೆ.
      ಈ ಕಾರ್ಯಕ್ರಮ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮವಾಗಿ ರೂಪುಗೊಂಡಿದ್ದು ಶ್ಲಾಘನೀಯವಾಗಿದೆ.ನಂತರದ 2 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಯಂ. ಸುಧೀರ್ ಕುಮಾರ್ ಶೆಟ್ಟಿ ಮತ್ತು ಕಾರ್ಯದರ್ಶಿಯಾಗಿ ಅರುಣ್ ಪಿಂಟೋರವರು ಕೆಲಸ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪುತ್ತೂರಿನ ಹೃದಯ ಭಾಗದಲ್ಲಿ ಛಾಯಾಭವನ ನಿರ್ಮಾಣಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಅದರಲ್ಲಿ ಯಶಸ್ಸು ಕಂಡ ವಲಯವಾಗಿದೆ. ಅದೇ ರೀತಿ ಛಾಯಾಗ್ರಾಹಕರ ನೋವಿಗೆ ತುರ್ತು ಸಹಾಯಧನವನ್ನು ನೀಡುವ ಕಾರ್ಯಕ್ರಮವನ್ನು ಈ ಸಂದರ್ಭದಿಂದ ಎಲ್ಲಾ ಸದಸ್ಯರ ಸಹಕಾರದಿಂದ ಮಾಡಲು ಶಕ್ತವಾಯಿತು. ಆ ನಂತರದ 2 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಹರೀಶ್ ಪುಣಚ, ಕಾರ್ಯದರ್ಶಿಯಾಗಿ ಪ್ರಸಾದ್ ಉಪ್ಪಿನಂಗಡಿ ರವರು ಕೆಲಸ ನಿರ್ವಹಿಸಿದರು. ಈ ಅವಧಿಯಲ್ಲಿ 5 ಬಡಮಕ್ಕಳನ್ನು ದತ್ತು ಸ್ವೀಕಾರ ಮಾಡುವ ಮೂಲಕ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸಿದ ವಲಯ ಪುತ್ತೂರು ಎಂದು ಹೇಳಲು ಹೆಮ್ಮೆಯಾಗುತ್ತದೆ. ಪ್ರಸ್ತುತ ಸಾಲಿನ 2 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬಿ. ಸುಧಾಕರ್ ಶೆಟ್ಟಿ ಕಾರ್ಯದರ್ಶಿಯಾಗಿ ಎ. ಗುಣಕರ್ ರವರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಸಮಾಜದಲ್ಲಿರುವ ತೀರಾ ಹಿಂದುಳಿದ ಕುಟುಂಬಗಳಿಗೆ ಧನ ಸಹಾಯ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ವಲಯ ಪುತ್ತೂರು ಎಂದು ಎಲ್ಲರ ಹೆಗ್ಗಳಿಕೆಯೊಂದಿಗೆ ಪ್ರೀತಿ ಗಳಿಸಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ವಲಯಗಳನ್ನು ಸೇರಿಸಿಕೊಂಡು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಮೆರುಗನ್ನು ನೀಡಿ ಸಂಘಟನಾತ್ಮಕ ವಲಯವೆನ್ನುವ ಪ್ರಶಂಸೆಗೆ ಪಾತ್ರರಾಗಿದ್ದೇವೆ.

Show more (+)

ಚಿತ್ರಸಂಪುಟ